Ads

Thursday 4 April 2024

SSLC ಪರೀಕ್ಷೆಯ ಮೌಲ್ಯಮಾಪನ ಕುರಿತು ಪರೀಕ್ಷಾ ಮಂಡಳಿಯಿಂದ ಮಹತ್ವದ ಸುತ್ತೋಲೆ

Admin       Thursday 4 April 2024

SSLC ಪರೀಕ್ಷೆಯ ಮೌಲ್ಯಮಾಪನದ ಕುರಿತು ಪರೀಕ್ಷಾ ಮಂಡಳಿ ಮಹತ್ವದ ಸುತ್ತೋಲೆ ಹೊರಡಿಸಿದ್ದು, ಮೌಲ್ಯಮಾಪಕರಿಗೆ ಕೆಲವು ಮಹತ್ವದ ಸೂಚನೆಗಳನ್ನು ನೀಡಿದೆ.

SSLC ಪರೀಕ್ಷೆಯು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಪ್ರಮುಖ ಘಟ್ಟವಾಗಿದೆ. ಹಾಗಾಗಿ ಪರೀಕ್ಷಾ ನಂತರ ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ ಹಾಗೂ ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ.

ಜಿಲ್ಲಾ ಉಪನಿರ್ದೇಶಕರುಗಳ ಶಿಫಾರಸ್ಸಿನನ್ವಯ ಮೌಲ್ಯಮಾಪನ ಕೇಂದ್ರಗಳಿಗೆ ವ್ಯವಸ್ಥಾಪಕರು ಹಾಗೂ ಜಂಟಿಮುಖ್ಯ ಮೌಲ್ಯಮಾಪಕರು ನೇಮಕಾತಿ ಮಾಡಲಾಗಿದ್ದು, ಸದರಿಯವರಿಗೆ ನೇಮಕಾತಿ ಆದೇಶ ಹಾಗೂ ಕರ್ತವ್ಯ ಮತ್ತು ಜವಾಬ್ದಾರಿಗಳನ್ನೊಳಗೊಂಡ ಸುತ್ತೋಲೆಯನ್ನು ರವಾನಿಸಲಾಗಿದೆ. ಮೌಲ್ಯಮಾಪನ ಕಾರ್ಯದ ಸಂಬಂಧ ಜಿಲ್ಲಾ ಉಪನಿರ್ದೇಶಕರು ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದ್ದು, ಮಾರ್ಗಸೂಚಿಯಲ್ಲಿರುವ ಎಲ್ಲಾ ಅಂಶಗಳನ್ನು ತಪ್ಪದೇ ಪಾಲಿಸಲು ತಿಳಿಸಿದೆ.

  1. ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾನ್ಯತೆ 1999 ರ ನಿಯಮ 4(2)(ಬಿ)(ಜಿ) ರಂತೆ ಮೌಲ್ಯಮಾಪನ ಕಾರ್ಯಕ್ಕೆ ಆಡಳಿತ ಮಂಡಳಿಗಳು ಶಾಲಾ ಕಟ್ಟಡವನ್ನು ಬಿಟ್ಟುಕೊಡುವುದನ್ನು ಕಡ್ಡಾಯಗೊಳಿಸಿದೆ. ಮೌಲ್ಯಮಾಪನ ಕಾರ್ಯಕ್ಕೆ ಸದರಿ ಶಾಲೆಯನ್ನು ಬಿಟ್ಟುಕೊಡಲು ಒಪ್ಪಿಗೆ ಪತ್ರ ಪಡೆಯುವುದು.
  2. ಮೌಲ್ಯಮಾಪನ ಕೇಂದ್ರಗಳ ಶಾಲಾ ಮುಖ್ಯಸ್ಥರಿಗೆ ಶಾಲಾ ಕಟ್ಟಡ, ಅಗತ್ಯ ಪೀಠೋಪಕರಣ ಹಾಗೂ ಭೌತಿಕ ಸೌಲಭ್ಯಗಳೊಂದಿಗೆ ಒಬ್ಬ ಶಾಲಾ ಗ್ರೂಪ್-ಡಿ ನೌಕರರನ್ನು ಮೌಲ್ಯಮಾಪನ ಕಾರ್ಯಕ್ಕೆ ಬಿಟ್ಟುಕೊಡಲು ಜಿಲ್ಲಾ ಉಪನಿರ್ದೇಶಕರು ಪತ್ರ ವ್ಯವಹಾರ ಮಾಡುವುದು.
  3. ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪಕರಿಗೆ ಕುಡಿಯುವ ನೀರು, ನೀರಿನ ಲಭ್ಯತೆಯಿರುವ ಶೌಚಾಲಯ, ಆಸನಗಳ ವ್ಯವಸ್ಥೆ, ಸುಭದ್ರತೆ ಬಗ್ಗೆ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳುವುದು.
  4. ಮೌಲ್ಯಮಾಪನ ಕಾರ್ಯಕ್ಕೆ ಮಂಡಲಿಯು ನೀಡಿರುವ ಎಲ್ಲಾ ಸುತ್ತೋಲೆ ಹಾಗೂ ಆದೇಶಗಳನ್ನು ಎಲ್ಲಾ ಅಧಿಕಾರಿಗಳು ಪಾಲಿಸುವಂತೆ ಕ್ರಮವಹಿಸುವುದು.
  5. ಮೌಲ್ಯಮಾಪನ ಕೇಂದ್ರಗಳಿಗೆ ಇಬ್ಬರು ಕಾರ್ಯನಿರ್ವಾಹಕರು ಹಾಗೂ ಇಬ್ಬರು ಡಿ-ಗ್ರೂಪ್ ನೌಕರರು ಕಾರ್ಯನಿರ್ವಹಿಸಲು ನಿಮ್ಮ ಹಂತದಲ್ಲಿ ನಿಯೋಜಿಸಿ ನೇಮಕ ಮಾಡುವುದು. ಪ್ರತಿ ಮೌಲ್ಯಮಾಪನ ಕೇಂದ್ರಕ್ಕೆ, ಮೇಲ್ಕಂಡ ನಿಯೋಜಿತ ಸಿಬ್ಬಂದಿಯನ್ನು ಸ್ಥಳೀಯ ಶಾಲೆಗಳಿಂದ ಆಯ್ಕೆ ಮಾಡುವುದು. ಪರಸ್ಥಳದವರನ್ನು ನೇಮಿಸಬಾರದು. ನೇಮಕಗೊಂಡ ವ್ಯವಸ್ಥಾಪಕರಿಗೆ ಸಕಾಲದಲ್ಲಿ ಉತ್ತರ ಪತ್ರಿಕೆಗಳ ಬಂಡಲುಗಳನ್ನು ಪಡೆದು ದಾಸ್ತಾನು ಮಾಡಲು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ.






logoblog

Thanks for reading SSLC ಪರೀಕ್ಷೆಯ ಮೌಲ್ಯಮಾಪನ ಕುರಿತು ಪರೀಕ್ಷಾ ಮಂಡಳಿಯಿಂದ ಮಹತ್ವದ ಸುತ್ತೋಲೆ

Previous
« Prev Post

No comments:

Post a Comment