ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಕಾತುರದಿಂದ ಕಾಯುತ್ತಿದ್ದ ಬೇಸಿಗೆ ರಜೆಯ ದಿನಗಳ ಕುರಿತು ಮಾಹಿತಿ ಇದೀಗ ದೊರಕಿದೆ. ಯಾವ ದಿನಾಂಕದಿಂದ ಯಾವ ದಿನಾಂಕದ ವರೆಗೂ ಬೇಸಿಗೆ ರಜೆ ಇರುತ್ತದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಕರ್ನಾಟಕ ರಾಜ್ಯದ ಶಾಲಾ ಮಕ್ಕಳಿಗೆ (1ನೇ ತರಗತಿ ಇಂದ 9 ನೇ ತರಗತಿ) ವರೆಗೂ ಪರೀಕ್ಷೆಯು ಮುಗಿಯುತ್ತಿದ್ದಂತೆ ಬೇಸಿಗೆ ರಜೆ ಕುರಿತು ಕುತೂಹಲ ಶುರುವಾಗುತ್ತದೆ. ಅಬ್ಬಾ ಎಷ್ಟು ಬೇಗ ರಜೆ ಶುರುವಾಗುತ್ತೋ. ಆದ್ರೆ ಈ ಬೇಸಿಗೆ ರಜೆ ಬಂದರೆ ಕೆಲವು ಪೋಷಕರು ಖುಷಿ ಪಡುತ್ತಾರೆ, ಕೆಲವರು. ಬಹುಸಂಖ್ಯಾತ ಫೋಷಕರು ತಮ್ಮ ಮಕ್ಕಳ ಜತೆಗೆ ಹೆಚ್ಚು ಸಮಯವನ್ನು ಕಳೆಯುತ್ತಾ ಆಟವಾಡಿಸುತ್ತಾ, ಸಮಯ ಸಿಕ್ಕರೆ ಪ್ರವಾಸ ಹೋಗುತ್ತಾರೆ.
ಕರ್ನಾಟಕ ರಾಜ್ಯದ ಶಾಲಾ ಮಕ್ಕಳಿಗೆ ಏಪ್ರಿಲ್ 11 ರಿಂದ ಮೇ 28 / 29 ರವರೆಗೆ ಬೇಸಿಗೆ ರಜೆ ನೀಡಲಾಗುವುದು ಎಂಬ ಮಾಹಿತಿ ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಇನ್ನು ಈಗಾಗಲೇ 1ನೇ ತರಗತಿ ಇಂದ 9 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಎಲ್ಲಾ ಪರೀಕ್ಷೆಗಳು ಮುಗಿದು ಹೋಗಿದೆ. ಇದರ ಫಲಿತಾಂಶವನ್ನು ಶಾಲೆಗಳಲ್ಲಿಯೇ ಶಿಕ್ಷಕರು ತಿಳಿಸಲಿದ್ದಾರೆ ಏಪ್ರಿಲ್ 11 ರಿಂದ ಬೇಸಿಗೆ ರಜೆ ಪ್ರಾರಂಭವಾಗಲಿದೆ ಎಂದು ಮೂಲಗಳು ಹೇಳಿವೆ.
ಏಪ್ರಿಲ್ 11 ರೊಳಗೆ ವಿದ್ಯಾರ್ಥಿಗಳಿಗೆ ಇನ್ನು 2 ರಜೆಗಳು ಸಿಗುತ್ತವೆ. ಒಂದು ಭಾನುವಾರ ಮತ್ತು ಏಪ್ರಿಲ್ 9 ರಂದು ಯುಗಾಧಿ ಹಬ್ಬಕ್ಕೆ ಮಕ್ಕಳಿಗೆ ರಜೆ ಇರುತ್ತದೆ.
ರಜೆ ವೇಳೆಯೂ ಬಿಸಿಯೂಟ
ಅಂದಹಾಗೆ ಇಷ್ಟು ದಿನ ಬೇಸಿಗೆ ರಜೆ ವೇಳೆಯಲ್ಲಿ ವಿದ್ಯಾರ್ಥಿಗಳ ಪೋಷಣೆ ದೃಷ್ಟಿಯಿಂದ ಶಿಕ್ಷಣ ಇಲಾಖೆ ಆಹಾರ ಧಾನ್ಯಗಳನ್ನು ಮಕ್ಕಳಿಗೆ ವಿತರಿಸುತ್ತಿತ್ತು. ಆದರೆ ಈ ಬಾರಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಶಾಲೆಗಳಲ್ಲಿಯೇ ನೀಡಲಾಗುವುದು, ಆಹಾರ ಧಾನ್ಯ ವಿತರಣೆ ಮಾಡುವ ನಿರ್ಧಾರಕ್ಕೆ ಬಂದಿದೆ. ಶಿಕ್ಷಣ ಇಲಾಖೆಯ ಈ ನಿರ್ಧಾರಗಳಿಂದ ಮಕ್ಕಳು ಬೇಸಿಗೆ ರಜೆಯಲ್ಲಿ ಆಟವಾಡಿಕೊಳ್ಳದೇ, ದೂರದ ಊರಿನ ತಮ್ಮ ಅಜ್ಜಿ, ತಾತನ ಮನೆಗೆ ಹೋಗುವ, ಸಂಬಂಧಿಗಳ ಮನೆಗೆ ಹೋಗುವುದು, ಪ್ರವಾಸ ಕಾರ್ಯಕ್ರಮಗಳನ್ನು ಮಾಡುವ ಈ ಯೋಜನೆ ಇಂದ ದೂರ ಉಳಿದು ಬಿಸಿಯೂಟಕ್ಕೆ ಬರುತ್ತಾರಾ? ಎಂಬ ಪ್ರಶ್ನೆ ಶಿಕ್ಷಣ ಇಲಾಖೆಗೆ ಮೂಡಿದೆ
1ನೇ ತರಗತಿಗೆ 6 ವರ್ಷ ಕಡ್ಡಾಯ
2024-25 ನೇ ಶೈಕ್ಷಣಿಕ ಸಾಲಿನ 1ನೇ ತರಗತಿ ಪ್ರವೇಶಾತಿ ಜೂನ್ 1 ರಿಂದ ಆರಂಭವಾಗುತ್ತದೆ. ಈ ಸಾಲಿನಿಂದ 1ನೇ ತರಗತಿ ಪ್ರವೇಶಕ್ಕೆ ದಾಖಲು ಮಾಡಿಸುವ ದಿನಾಂಕಗಳಿಗೆ ಕಡ್ಡಾಯವಾಗಿ ವಿದ್ಯಾರ್ಥಿ 6 ವರ್ಷಮುಗಿಸಿರಬೇಕು ಎಂಬ ನಿಯಮವನ್ನು ಶಾಲಾ ಶಿಕ್ಷಣ ಇಲಾಖೆ ಜಾರಿ ಮಾಡಿದೆ.
1ನೇ ತರಗತಿಗೆ 6 ವರ್ಷ ಕಡ್ಡಾಯ
2024-25 ನೇ ಶೈಕ್ಷಣಿಕ ಸಾಲಿನ 1ನೇ ತರಗತಿ ಪ್ರವೇಶಾತಿ ಜೂನ್ 1 ರಿಂದ ಆರಂಭವಾಗುತ್ತದೆ. ಈ ಸಾಲಿನಿಂದ 1ನೇ ತರಗತಿ ಪ್ರವೇಶಕ್ಕೆ ದಾಖಲು ಮಾಡಿಸುವ ದಿನಾಂಕಗಳಿಗೆ ಕಡ್ಡಾಯವಾಗಿ ವಿದ್ಯಾರ್ಥಿ 6 ವರ್ಷಮುಗಿಸಿರಬೇಕು ಎಂಬ ನಿಯಮವನ್ನು ಶಾಲಾ ಶಿಕ್ಷಣ ಇಲಾಖೆ ಜಾರಿ ಮಾಡಿದೆ.
No comments:
Post a Comment