Ads

Thursday 2 February 2023

SSLC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ತಾಲೂಕು ಮಟ್ಟದಲ್ಲೇ ಪ್ರಿಪರೇಟರಿ ಪ್ರಶ್ನೆ ಪತ್ರಿಕೆ ತಯಾರಿ

Admin       Thursday 2 February 2023



ಬೆಂಗಳೂರು: ಎಸ್ ಎಸ್ ಎಲ್ ಸಿ (SSLC) ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಈ ಬಾರಿ ತಾಲೂಕು ಮಟ್ಟದಲ್ಲಿ ಸಿದ್ದಪಡಿಸಲಾಗುತ್ತಿದೆ.

ಹೌದು, ಇದುವರೆಗೆ ರಾಜ್ಯ ಮಟ್ಟದಲ್ಲಿ ನಡೆಯುತ್ತಿದ್ದ ಪ್ರಶ್ನೆ ಪತ್ರಿಕೆ ತಯಾರಿಯ ಜವಾಬ್ದಾರಿಯನ್ನು 2022-23ರ ಸಾಲಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಗಿದೆ.

ಪೂರ್ವ ಸಿದ್ಧತಾ ಪರೀಕ್ಷೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲೇ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಅನುಮೋದನೆ ನೀಡಿದ್ದಾರೆ.

ಮಾದರಿ ಪ್ರಶ್ನೆ ಪತ್ರಿಕೆಯನ್ನು ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್ಗೆ ಅಪ್ಲೋಡ್ ಮಾಡಲಾಗುವುದು. ಆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಅನುಸರಿಸಿ ಬಿಇಒಗಳು ತಮ್ಮ ಹಂತದಲ್ಲಿಯೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನಂತರ ಮುದ್ರಣ ಮಾಡಿ ತಾಲೂಕು ಹಂತದ ಸ್ಟ್ಯಾಂಗ್ ರೂಂನಲ್ಲಿ ಸುರಕ್ಷಿತವಾಗಿಡಬೇಕು .

ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಪರೀಕ್ಷೆ ನಡೆಸಬೇಕು, ಆಯಾ ವಿಷಯದ ಪರೀಕ್ಷಾ ದಿನದಂದು ಅವುಗಳನ್ನು ಬಿಗಿ ಭದ್ರತೆಯಲ್ಲಿ ಶಾಲೆಗಳಿಗೆ ವಿತರಣೆ ಮಾಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದೆ.

ಎಕ್ಸಾಂ ಬರೆಯಲು ಬಂದು ಪ್ರಜ್ಞೆ ತಪ್ಪಿ ಬಿದ್ದ ವಿದ್ಯಾರ್ಥಿ!. ಇದಕ್ಕೆ ಕಾರಣ ಕೇಳಿದ್ರೆ, ನೀವೂ ಶಾಕ್‌ ಆಗ್ತೀರ!



ನಳಂದಾ: 12ನೇ ತರಗತಿಯ ಬಾಲಕನೊಬ್ಬ ಎಕ್ಸಾಂ ಬರೆಯಲು ಪರೀಕ್ಷಾ ಕೊಠಡಿಗೆ ಬಂದಿದ್ದಾನೆ. ಈ ವೇಳೆ, ಆ ಕೊಠಡಿಯಲ್ಲಿದ್ದ ಹುಡುಗಿಯರ ದಂಡು ಕಂಡು ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಷರೀಫ್‌ನ ಅಲ್ಲಮ ಇಕ್ಬಾಲ್ ಕಾಲೇಜಿನ ಈ ವಿದ್ಯಾರ್ಥಿ ಬ್ರಿಲಿಯಂಟ್ ಶಾಲೆಯಲ್ಲಿ ಮಧ್ಯಂತರ ಪರೀಕ್ಷೆಯನ್ನು ತೆಗೆದುಕೊಳ್ಳಲು ಹೋಗಿದ್ದನು.

ಆತ ಪರೀಕ್ಷೆ ಬರೆಯುವ ಕೊಠಡಿಗೆ ಪ್ರವೇಶಿಸುತ್ತಿದ್ದಂತೇ, ಆ ಕೊಠಡಿಯಲ್ಲಿದ್ದ ಸುಮಾರು 50 ಹುಡುಗಿಯರನ್ನು ಕಂಡು ಭಯದಿಂದ ಮೂರ್ಛೆ ಹೋಗಿದ್ದಾನೆ ಎಂದು ವಿದ್ಯಾರ್ಥಿಯ ಚಿಕ್ಕಮ್ಮ ಹೇಳಿದ್ದಾರೆ.

ಹುಡುಗ ಮೂರ್ಛೆ ಹೋದ ನಂತ್ರ ಜ್ವರ ಕಾಣಿಸಿಕೊಂಡಿತ್ತ. ಅಗ ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಸ್ಥಿತಿ ಸ್ಥಿರವಾಗಿದೆ.


logoblog

Thanks for reading SSLC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ತಾಲೂಕು ಮಟ್ಟದಲ್ಲೇ ಪ್ರಿಪರೇಟರಿ ಪ್ರಶ್ನೆ ಪತ್ರಿಕೆ ತಯಾರಿ

Previous
« Prev Post

No comments:

Post a Comment