Ads

Thursday 2 February 2023

ಹುಟ್ಟಿದ ದಿನಾಂಕದ ಆಧಾರದ ಮೇಲೆ ಮದುವೆ ದಿನಾಂಕವನ್ನು ಸುಲಭದಲ್ಲಿ ಕಂಡು ಹಿಡಿಯಬಹುದು! ಇಲ್ಲಿದೆ ಮಾಹಿತಿ

Admin       Thursday 2 February 2023



ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿನ ಜೊತೆಗೆ ಆತನ ಭವಿಷ್ಯ (Astrology), ಜಾತಕ ಹೀಗೆಲ್ಲಾ ರೂಪುಗೊಳ್ಳುತ್ತದೆ. ಇದು ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕ, ಸಮಯ ಇವೆಲ್ಲವನ್ನೂ ನೋಡಿಕೊಂಡು ರಚಿಸಲಾಗುತ್ತದೆ. ಈ ಹುಟ್ಟಿದ ದಿನಾಂಕದಿಂದ ಜ್ಯೋತಿಷ್ಯದಲ್ಲಿ ನಮ್ಮ ಭವಿಷ್ಯ, ನಾವು ಏನಾಗುತ್ತೇವೆ, ನಮ್ಮ ಸ್ವಭಾವ, ವ್ಯಕ್ತಿತ್ವ ಎಲ್ಲವನ್ನೂ ಹೇಳಲಾಗುತ್ತದೆ.

ಅಂತೆಯೇ ನಮ್ಮ ಹುಟ್ಟಿದ ದಿನಾಂಕ ನಮ್ಮ ಮದುವೆ ಜೀವನವನ್ನು ಸಹ ನಿರ್ಧರಿಸುತ್ತದೆ. ಹುಟ್ಟಿದ ದಿನಾಂಕದ ಮೂಲಕ ನಾವು ಲವ್‌ ಮ್ಯಾರೇಜ್‌ (Love Marriage) ಆಗುತ್ತೇವೆಯೋ, ಇಲ್ಲಾ ಅರೇಂಜ್‌ ಮ್ಯಾರೇಜ್‌ (Arrange Marriage) ಆಗುತ್ತೇವೆಯೋ ಹಾಗೆ ನಮ್ಮ ಜನ್ಮ ದಿನಾಂಕ ಆಧರಿಸಿ ನಮ್ಮ ಮದುವೆ ಜೀವನ ಹೇಗಿರುತ್ತದೆ ಎಂಬುದನ್ನು ಸಹ ಹೇಳಲಾಗುತ್ತದೆ.

ಜನ್ಮದಿನಾಂಕದ ಮೂಲಕ ಮದುವೆ ದಿನಾಂಕ ಗೊತ್ತು ಮಾಡ್ಬಹುದು

  • ಹೀಗೆ ಒಬ್ಬರ ಮದುವೆಯನ್ನು ನಿಶ್ಚಯ ಮಾಡಲು ಜ್ಯೋತಿಷಿಗಳ ಬಳಿ ಹೋದರೆ ಮೊದಲು ಅವರು ಕೇಳುವುದು ನಮ್ಮ ಹುಟ್ಟಿದ ದಿನಾಂಕವನ್ನು. ವಧು-ವರರ ಹುಟ್ಟಿದ ದಿನಾಂಕ, ಅವರ ಕುಂಡಲಿ, ಸಂಖ್ಯಾಶಾಸ್ತ್ರ ಹೀಗೆ ಎಲ್ಲವನ್ನೂ ಲೆಕ್ಕಾ ಹಾಕಿ ಮದುವೆ ದಿನಾಂಕವನ್ನು ಗೊತ್ತು ಪಡಿಸಲಾಗುತ್ತದೆ.

  • ಮದುವೆ ಜೀವನ ಉದ್ದಕ್ಕೂ ಜೊತೆಗಿರುವ ಸಂಗಾತಿಯನ್ನು ನೀಡುವುದರಿಂದ ಎಲ್ಲವನ್ನೂ ಶಾಸ್ತ್ರಬದ್ಧವಾಗಿ ಗುರುತಿಸಲು ಜ್ಯೋತಿಷ್ಯ ಹೇಳುತ್ತದೆ. ಹಾಗಾದರೆ ನಾವೇ ಸ್ವತಹಃ ನಮ್ಮ ಮದುವೆ ದಿನಾಂಕವನ್ನು ಹೇಗೆ ಕಂಡುಹಿಡಿಯುವುದು ಎಂಬುದನ್ನು ಇಲ್ಲೊಂದು ಸರಳ ಮಾರ್ಗದ ಮೂಲಕ ಕಂಡುಹಿಡಿಯೋಣ ಬನ್ನಿ.

ಮದುವೆಯ ದಿನಾಂಕ ಮತ್ತು ಸಂಖ್ಯಾಶಾಸ್ತ್ರ

  • ಸಂಖ್ಯಾಶಾಸ್ತ್ರವು ಜನ್ಮ ದಿನಾಂಕದಂದು ಮದುವೆಯ ಪರಿಪೂರ್ಣ ದಿನಾಂಕವನ್ನು ಆಯ್ಕೆ ಮಾಡಲು ನಮಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಮದುವೆಗೆ ಸರಿಯಾದ ದಿನಾಂಕವನ್ನು ನಿರ್ಧರಿಸಲು, ಜನ್ಮ ದಿನಾಂಕವನ್ನು ಪರಿಗಣಿಸಬೇಕು.

  • ಒಂದು ಸಾಮಾನ್ಯ ನಿಯಮದ ಪ್ರಕಾರ, ಯಾವುದೇ ದಿನಾಂಕದಂದು ಜನಿಸಿದ ಎಲ್ಲ ವ್ಯಕ್ತಿಗಳಿಗೆ ಪ್ರತಿ ತಿಂಗಳ 1 ಮತ್ತು 9 ದಿನಾಂಕಗಳು ಮದುವೆಯಾಗಲು ಉತ್ತಮ ದಿನಾಂಕಗಳಾಗಿವೆ.

  • ಅಲ್ಲದೆ, ಮದುವೆಯ ದಿನಾಂಕದ ಡೆಸ್ಟಿನಿ ಸಂಖ್ಯೆ 1 ಅಥವಾ 9 ಆಗಿದ್ದರೆ (ನೀಡಿದ ದಿನಾಂಕದಲ್ಲಿನ ಎಲ್ಲಾ ಅಂಕೆಗಳನ್ನು ಒಟ್ಟುಗೂಡಿಸಿ) ಆ ದಿನಾಂಕವು ಎಲ್ಲಾರಿಗೂ ಮದುವೆಗೆ ಸೂಕ್ತ ದಿನಾಂಕವಾಗಿರುತ್ತದೆ.

ಡೆಸ್ಟಿನಿ ಸಂಖ್ಯೆಯನ್ನು ಲೆಕ್ಕಾಚಾರ ಮಾಡುವುದು ಹೇಗೆ?

  • ಮೊದಲು ವರ ಮತ್ತು ವಧುವಿನ ಡೆಸ್ಟಿನಿ ಸಂಖ್ಯೆಯನ್ನು ಲೆಕ್ಕ ಹಾಕಿ ಮತ್ತು ಅವನ್ನು ಒಟ್ಟಿಗೆ ಸೇರಿಸಿ. ಡೆಸ್ಟಿನಿ ಸಂಖ್ಯೆಯನ್ನು ಕಂಡುಹಿಡಿಯಲು, ಕೊನೆಯ ಮತ್ತು ಅಂತಿಮ ಏಕ ಅಂಕಿಯ ಸಂಖ್ಯೆಯನ್ನು ಪಡೆಯಲು ಹುಟ್ಟಿದ ದಿನಾಂಕದಲ್ಲಿನ ಅಂಕೆಗಳನ್ನು ಸೇರಿಸಿ.

  • ಉದಾಹರಣೆಗೆ, ಹುಡುಗನ ಹುಟ್ಟಿದ ದಿನಾಂಕ 24/10/1995 ಆಗಿದೆ ಎಂದುಕೊಳ್ಳಿ, ಈ ದಿನಾಂಕದಿಂದ ಹೇಗೆ ಡೆಸ್ಟಿನಿ ಸಂಖ್ಯೆಯನ್ನು ಕಂಡುಹಿಡಿಯುವುದು ಇಲ್ಲಿ ನೋಡೋಣ.

ಹಂತ 1: 24/10/1995 ಈ ಹುಟ್ಟಿದ ಸಂಖ್ಯೆಯನ್ನು ಮೊದಲಿಗೆ ಬಿಡಿಸಿ ಬರೆಯಬೇಕು, ಅದನ್ನು ಬಿಡಿಸಿ ಬರೆದಾಗ ಕೆಳಗಿನ ರೀತಿ ಆಗುತ್ತದೆ. 2+4+1+0+1+9+9+5 = 31 ಹುಟ್ಟಿದ ಸಂಖ್ಯೆಯನ್ನು ಸಂಪೂರ್ಣ ಬಿಡಿಸಿ ಅದನ್ನು ಒಟ್ಟು ಕೂಡಿದಾಗ ಇಲ್ಲಿ ನಮಗೆ 31 ಸಂಖ್ಯೆ ಬಂದಿದೆ.

ಹಂತ - 2: ಈ ಹಂತದಲ್ಲಿ ನಾವು ಕೂಡಿ ಬಂದ ಸಂಖ್ಯೆಯನ್ನು ಬಿಡಿಸಿ ಬರೆಯಬೇಕು, ನಂತರ ಅವೆರೆಡು ನಂಬರ್‌ ಅನ್ನು ಕೂಡಿಸಿದರೆ ಉತ್ತರ ಸಿಗುತ್ತದೆ. 3+1=4 ಇಲ್ಲಿ ಹುಟ್ಟಿದ ಸಂಖ್ಯೆಯನ್ನು ಸಂಪೂರ್ಣ ಬಿಡಿಸಿ ಅದನ್ನು ಒಟ್ಟು ಕೂಡಿದಾಗ ಇಲ್ಲಿ ನಮಗೆ 31 ಸಂಖ್ಯೆ ಬಂದಿದೆ, ಈ 31 ಅನ್ನು ಬಿಡಿಸಿ ಬರೆದು ಕೂಡಿಸಿದಾಗ 4 ಬಂತು. ಆದ್ದರಿಂದ ವರನ ಡೆಸ್ಟಿನಿ ಸಂಖ್ಯೆ 4 ಆಗಿದೆ.

ಹಂತ - 3 : ಅದೇ ರೀತಿಯಲ್ಲಿ, ವಧುವಿನ ಜನ್ಮದಿನಾಂಕದಲ್ಲಿ ಅಂಕೆಗಳನ್ನು ಸೇರಿಸಿ ಮತ್ತು ಒಂದೇ ಅಂಕಿಯ ಸಂಖ್ಯೆಯನ್ನು ಪಡೆಯಿರಿ. ಈಗ ವರ ಮತ್ತು ವಧುವಿನ ಡೆಸ್ಟಿನಿ ಸಂಖ್ಯೆಗಳ ಒಟ್ಟು ಮೊತ್ತವು ಮದುವೆಯ ದಿನಾಂಕವನ್ನು ನಿರ್ಧರಿಸಲು ದಂಪತಿಗಳ ಸಂಯೋಜಿತ ಡೆಸ್ಟಿನಿ ಸಂಖ್ಯೆಯನ್ನು ನಿಮಗೆ ನೀಡುತ್ತದೆ.

  • ಅಂದರೆ ವರನ ಅದೃಷ್ಟ ಸಂಖ್ಯೆ 4 ಮತ್ತು ವಧುವಿನ ಅದೃಷ್ಟ ಸಂಖ್ಯೆ 2 ಎಂದಾದರೆ ಅದನ್ನು ಕೂಡಿಸಿ ಬರುವ ಸಂಖ್ಯೆಯೇ ಮದುವೆ ದಿನಾಂಕ.ಹುಡುಗ ಮತ್ತು ಹುಡುಗಿಯ ಡೆಸ್ಟಿನಿ ಸಂಖ್ಯೆ ಕೂಡಿಸಿ ಬರೆದಲ್ಲಿ 4 + 2 = 6 ಆಗುತ್ತದೆ. ಆಗಿದ್ದರೆ ಈಗ ಇಬ್ಬರ ಡೆಸ್ಟಿನಿ ಸಂಖ್ಯೆ 6 ಆಗಿರುತ್ತದೆ ಅಂದರೆ ಮದುವೆ ದಿನಾಂಕ ಕೂಡ 6 ಆಗಿರುತ್ತದೆ.

ಈ ದಿನಾಂಕಗಳಲ್ಲಿ ಮದುವೆಯನ್ನು ತಪ್ಪಿಸಿ

  • ಸಾಮಾನ್ಯ ನಿಯಮದ ಪ್ರಕಾರ, ಡೆಸ್ಟಿನಿ ಸಂಖ್ಯೆಗಳು 4,5 ಅಥವಾ 8 ಅನ್ನು ಹೊಂದಿರುವ ದಿನಾಂಕಗಳಲ್ಲಿ ಮದುವೆಯನ್ನು ನಿಗದಿಪಡಿಸಬಾರದು ಎಂದು ಸಂಖ್ಯಾಶಾಸ್ತ್ರವು ಹೇಳುತ್ತದೆ.

logoblog

Thanks for reading ಹುಟ್ಟಿದ ದಿನಾಂಕದ ಆಧಾರದ ಮೇಲೆ ಮದುವೆ ದಿನಾಂಕವನ್ನು ಸುಲಭದಲ್ಲಿ ಕಂಡು ಹಿಡಿಯಬಹುದು! ಇಲ್ಲಿದೆ ಮಾಹಿತಿ

Previous
« Prev Post

No comments:

Post a Comment