Headlines
Loading...
20,000 ಕೋಟಿ ರೂ.ಗಳ ಫಾಲೋ ಆನ್ ಷೇರು ಮಾರಾಟ ರದ್ದುಗೊಳಿಸಿದ ಅದಾನಿ ಗ್ರೂಪ್

20,000 ಕೋಟಿ ರೂ.ಗಳ ಫಾಲೋ ಆನ್ ಷೇರು ಮಾರಾಟ ರದ್ದುಗೊಳಿಸಿದ ಅದಾನಿ ಗ್ರೂಪ್



ಹೊಸದಿಲ್ಲಿ: ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ತನ್ನ ₹ 20,000 ಕೋಟಿ ಫಾಲೋ-ಆನ್ ಷೇರು ಮಾರಾಟವನ್ನು ರದ್ದುಗೊಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮಾರುಕಟ್ಟೆಯ ಚಂಚಲತೆಯನ್ನು ಪರಿಗಣಿಸಿ ಕಂಪನಿಯು ಫಾಲೋ-ಆನ್ ಷೇರು ಅಥವಾ ಎಫ್‌ಪಿಒವನ್ನು ರದ್ದುಗೊಳಿಸಿದ್ದು, ಹೂಡಿಕೆದಾರರಿಗೆ ಎಫ್‌ಪಿಒ ಹಣವನ್ನು ಮರುಪಾವತಿಸುತ್ತದೆ ಎಂದು ಹೇಳಿದೆ.

ಇಂದು ಮಾರುಕಟ್ಟೆಯು ಅಸಹಜವಾಗಿದೆ. ನಮ್ಮ ಸ್ಟಾಕ್ ಬೆಲೆಯು ಏರಿಳಿತವನ್ನು ಕಾಣುತ್ತಿದೆ. ಈ ಅಸಾಧಾರಣ ಸನ್ನಿವೇಶಗಳನ್ನು ಗಮನಿಸಿದರೆ, ಕಂಪನಿಯ ಮಂಡಳಿಯು ಸಮಸ್ಯೆಯನ್ನು ಮುಂದುವರಿಸುವುದು ನೈತಿಕವಾಗಿ ಸರಿಯಲ್ಲ ಎಂದು ಭಾವಿಸಿದೆ. ಹೂಡಿಕೆದಾರರ ಹಿತಾಸಕ್ತಿ ಅತಿಮುಖ್ಯ ಮತ್ತು ಆದ್ದರಿಂದ ಯಾವುದೇ ಸಂಭಾವ್ಯ ಆರ್ಥಿಕ ನಷ್ಟದಿಂದ ಅವರನ್ನು ರಕ್ಷಿಸಲು, ಮಂಡಳಿಯು FPO ನೊಂದಿಗೆ ಮುಂದುವರಿಯದಿರಲು ನಿರ್ಧರಿಸಿದೆ, 'ಎಂದು ಅದಾನಿ ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ.

ಗ್ರಾಮ ಪಂಚಾಯತ್ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟ



ಬೆಂಗಳೂರು:

ಗ್ರಾಮ ಪಂಚಾಯತ್ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು, ಫೆ.25 ರಂದು ಚುನಾವಣೆ ನಡೆಸಲು ನಿರ್ಧರಿಸಿದೆ.

ಅವಧಿ ಮುಗಿದ ರಾಜ್ಯದ ಎಂಟು ಗ್ರಾಮ ಪಂಚಾಯತ್ ಗಳ 127 ಸ್ಥಾನಗಳು ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ 103 ಗ್ರಾಮ ಪಂಚಾಯತ್ಗಳ 135 ಸ್ಥಾನಗಳಿಗೆ ಫೆ.25ರಂದು ಉಪಚುನಾವಣೆ ನಡೆಸಲು ರಾಜ್ಯ ಚುನಾವಣ ಆಯೋಗ ನಿರ್ಧರಿಸಿದೆ.

ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಹಾಸನ, ವಿಜಯಪುರ, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳ 8 ಗ್ರಾ.ಪಂ.ಗಳ 127 ಸದಸ್ಯ ಸ್ಥಾನಗಳು ಮತ್ತು ವಿವಿಧ ಕಾರಣಗಳಿಂದ ತೆರವಾಗಿರುವ 30 ಜಿಲ್ಲೆಗಳ 103 ಗ್ರಾಮ ಪಂಚಾಯತ್ ಗಳ 135 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲಿದೆ.

ನಾಮಪತ್ರ ಸಲ್ಲಿಸಲು ಫೆ.14 ಕೊನೆ ದಿನಾಂಕವಾಗಿದೆ. ಫೆ.15ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆದುಕೊಳ್ಳಲು ಫೆ.17 ಕೊನೆ ದಿನಾಂಕವಾಗಿದೆ. ಫೆ. 25ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಫೆ.28 ರಂದು ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗ ಪ್ರಕಟಣೆ ತಿಳಿಸಿದೆ.


0 Comments: