Headlines
Loading...
Online ಕ್ಲಾಸ್ ವೇಳೆಯೇ ಶಿಕ್ಷಕನ ಹತ್ಯೆ ಮೊಬೈಲ್ ನಲ್ಲಿ ಸೆರೆಯಾಯ್ತು ಘಟನೆ ದೃಶ್ಯ

Online ಕ್ಲಾಸ್ ವೇಳೆಯೇ ಶಿಕ್ಷಕನ ಹತ್ಯೆ ಮೊಬೈಲ್ ನಲ್ಲಿ ಸೆರೆಯಾಯ್ತು ಘಟನೆ ದೃಶ್ಯ



ಉತ್ತರ ಪ್ರದೇಶ:

Online ನಲ್ಲಿ ವಿಡಿಯೋ ಪಾಠ ಮಾಡುತ್ತಿದ್ದಾಗ ಶಿಕ್ಷಕನೋರ್ವನನ್ನು ಇಬ್ಬರು ದುಷ್ಕರ್ಮಿಗಳು ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಗೊಂಡಾದ ಫೋರ್ಬ್ಸ್‌ಗಂಜ್ ಪ್ರದೇಶದಲ್ಲಿ ನಡೆದಿದೆ. ಶಿಕ್ಷಕ ಕೃಷ್ಣ ಕುಮಾರ್ ಯಾದವ್ (32 ವರ್ಷ) ಕೊಲೆಯಾದ ವ್ಯಕ್ತಿ.

ಅಂಬೇಡ್ಕರ್‌ನಗರ ಜಿಲ್ಲೆಯವರಾದ ಶ್ರೀ ಯಾದವ್ ಅವರು ಉತ್ತರ ಪ್ರದೇಶದ ಗೊಂಡಾದ ಫೋರ್ಬ್ಸ್‌ಗಂಜ್ ಪ್ರದೇಶದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಇವರು ಶಿಕ್ಷಕರಾಗಿದ್ದು, ತಮ್ಮ ಕೋಣೆಯಲ್ಲಿ ಒಬ್ಬಂಟಿಯಾಗಿದ್ದು, ಆನ್‌ಲೈನ್ ಟ್ಯೂಷನ್ ತರಗತಿಯನ್ನು ನೀಡುತ್ತಿದ್ದರು. ಈ ವೇಳೆ ಆರೋಪಿಗಳು ಕೋಣೆಯೊಳಗೆ ನುಗ್ಗಿ ಶಿಕ್ಷಕನನ್ನು ಕತ್ತು ಹಿಸುಕಿ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಪ್ರಕರಣದ ಸಂಬ‍ಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆಯಲ್ಲಿ ಮೃತ ಯಾದವ್ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಶಿಕ್ಷಕಿಯಾಗಿದ್ದ ತನ್ನ ಸಹೋದರಿಯೊಂದಿಗೆ ವಾಸಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಮುಖ ಆರೋಪಿ ಸಂದೀಪ್ ಯಾದವ್, ಶಿಕ್ಷಕಿಯಾಗಿದ್ದ ಕೃಷ್ಣ ಯಾದವ್ ಅವರ ಸಹೋದರಿಯೊಂದಿಗೆ ಮಾತನಾಡಲು ಪ್ರಾರಂಭಿಸಿದ್ದನು. ಈ ವಿಚಾರವಾಗಿ ಸಂದೀಪ್ ಅವರನ್ನು ಕೃಷ್ಣ ಯಾದವ್ ನಿಂದಿಸಿದ್ದರು. ಇದರಿಂದ ಆರೋಪಿ ಸಂದೀಪ್‌ ಯಾದವ್‌ ಕೋಪಗೊಂಡಿದ್ದನು. ಇದೇ ಕಾರಣಕ್ಕೆ ಆರೋಪಿಗಳಾದ ಸಂದೀಪ್ ಯಾದವ್ ಮತ್ತು ಜವಾಹಿರ್ ಮಿಶ್ರಾ ಅಲಿಯಾಸ್ ಜಗ್ಗ ಅವರ ಮನೆಗೆ ನುಗ್ಗಿ ವಾಗ್ವಾದ ನಡೆಸಿ ನಂತರ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೇ ಕೃಷ್ಣ ಕುಮಾರ್ ಯಾದವ್ ಅವರನ್ನು ಕೊಲೆ ಮಾಡಲು ಸಂದೀಪ್ ತನ್ನ ಸ್ನೇಹಿತ ಜಗ್ಗನ ಸಹಾಯವನ್ನು ಕೋರಿದ್ದಾನೆ ಎನ್ನಲಾಗಿದೆ. ಇದೀಗ ಪ್ರಕರಣದ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ. ಅಲ್ಲದೇ ಶಿಕ್ಷಕ ಕೃಷ್ಣ ಕುಮಾರ್ ಆನ್‌ ಲೈನ್‌ ತರಗತಿ ನಡೆಸಲು ಬಳಸುತ್ತಿದ್ದ ಮೊಬೈಲ್‌ ಫೋನ್‌ ಅನ್ನು ವಶಕ್ಕೆ ಪಡೆದುಕೊಂಡು ಸಾಕ್ಷ್ಯಾಧಾರಗಳನ್ನು ಪರಿಶೀಲಿಸುತ್ತಿದ್ದಾರೆ.

ಪಾಗಲ್ ಪ್ರೇಮಿಯ ಕಾಟಕ್ಕೆ ಬೇಸತ್ತು ದಂತ ವೈದ್ಯೆ ಆತ್ಮಹತ್ಯೆ



ಬೆಂಗಳೂರು:-

ಪಾಗಲ್ ಪ್ರೇಮಿಯ ಕಾಟಕ್ಕೆ ಬೇಸತ್ತು ದಂತ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಸಂಜಯ್ ನಗರದಲ್ಲಿ ನಡೆದಿದೆ. ಜನವರಿ 25ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪ್ರಿಯಾಂನ್ಷಿ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡ ದಂತ ವೈದ್ಯೆ. ಉತ್ತರಪ್ರದೇಶ ಲಕ್ನೋ ಮೂಲದ ಪ್ರಿಯಾಂನ್ಷಿ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಂತವೈದ್ಯೆ ಆಗಿ ಕೆಲಸ ಮಾಡುತ್ತಿದ್ದರು.

ಅದೇ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಸುಮಿತ್ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಆದ್ರೆ ಪ್ರಿಯಾಂನ್ಷಿ ತ್ರಿಪಾಠಿ, ಪ್ರೀತಿಗೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ವೈದ್ಯ ಸುಮಿತ್, ಪ್ರಿಯಾಂನ್ಷಿ ತ್ರಿಪಾಠಿಯ ವ್ಯಕ್ತಿತ್ವದ ಬಗ್ಗೆ ಕೆಟ್ಟದಾಗಿ ಬಿಂಬಿಸಿದ್ದ. ಆಕೆ ಸರಿಯಿಲ್ಲ, ಸಿಗರೆಟ್ ಸೇದುತ್ತಾಳೆ, ಡ್ರಿಂಗ್ಸ್ ಮಾಡ್ತಾಳೆ.. ಸಿಕ್ಕ ಸಿಕ್ಕವರ ಜೊತೆಗೆ ಓಡಾಡ್ತಾಳೆ ಅಂತಾ ಹೇಳಿಕೊಂಡು ಬರ್ತಿದ್ದ. ಇದರಿಂದ ಮನನೊಂದ ಪ್ರಿಯಾಂನ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಿಯಾಂನ್ಷಿ ತಂದೆ ಸುಶೀಲ್ ತ್ರಿಪಾಠಿ ಅವರು ನೀಡಿದ ದೂರು ಆಧರಿಸಿ ಸಂಜಯ್ ನಗರದ ಪೊಲೀಸರು ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.




0 Comments: