-->

ಕೋಲಾರದಲ್ಲಿ ಸ್ಪರ್ಧೆ ನಿರ್ಧಾರ ಸಿದ್ದರಾಮಯ್ಯಗೆ ಮಾರಕ, ಬಿಜೆಪಿ ಗೆಲ್ತೀವಿ ಎಂದ ಸಚಿವ ಸುಧಾಕರ್


ಚಿಕ್ಕಬಳ್ಳಾಪುರ:-

ಸಿದ್ದರಾಮಯ್ಯ ಅವರು ಕೋಲಾರದಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧಾರ ಮಾಡಿರುವುದು ರಾಜಕೀಯವಾಗಿ ಅವರಿಗೆ ಮಾರಕವಾಗಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.

ಕೋಲಾರದಿಂದ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧೆ ಮಾಡಲು ನಮ್ಮದೇನು ತಕರಾರಿಲ್ಲ. ನಾವು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಏನು ವ್ಯೂಹ ಮಾಡಬೇಕು ಅದನ್ನು ಮಾಡುತ್ತೇವೆ. ಆದರೆ ಸಿದ್ದರಾಮಯ್ಯನವರ ರಾಜಕೀಯವಾಗಿ ಮಾರಕವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಸಿದ್ದರಾಮಯ್ಯ ಸ್ಪರ್ಧೆಯಿಂದ ಕೋಲಾರ ಚಿಕ್ಕಬಳ್ಳಾಪುರ ಒಟ್ಟಾರೆ ಚುನಾವಣೆ ಪ್ರಭಾವ ಬೀರುವುದಿಲ್ಲ. ನಿಜವೆಂದರೆ ಕಾಂಗ್ರೆಸ್ಗೆ ಇದರಿಂದ ಹೊಡೆತ ಬೀಳುವ ಸಾಧ್ಯತೆಯೇ ಹೆಚ್ಚು ಎಂದ ಸಚಿವ ಸುಧಾಕರ್, ಕೋಲಾರಕ್ಕೂ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧ ಇಲ್ಲ. ಜಾತಿ ಮತಗಳ ಲೆಕ್ಕಾಚಾರದ ಮೇಲೆ ಕೋಲಾರಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ ಎಂದರು.

ಕೋಲಾರದಲ್ಲಿ ಕೆಲವರ ಬೆರಳುಗಳು ಅಲ್ಲಾಡುತ್ತಿವೆ. ಸಿದ್ದರಾಮಯ್ಯ ಅವರನ್ನು ಬಲಿಪಶು ಮಾಡಲು ಅವರನ್ನು ಇಲ್ಲಿಗೆ ಬರುವಂತೆ ತುಂಬಲು ಬಿದ್ದಿದ್ದಾರೆ, ಎಂದ ಸುಧಾಕರ್ ಸಿದ್ದರಾಮಯ್ಯ ಅವರು ಒಂದೊಂದು ಚುನಾವಣೆಗೆ ಒಂದೊಂದು ಕ್ಷೇತ್ರಕ್ಕೆ ಯಾಕೆ ಹೋಗ್ತಿದ್ದಾರೆ ಅಂತ ಅವರನ್ನೇ ಕೇಳಬೇಕು ಎಂದರು.

ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಗೌರವ ಇದೆ, ಜೊತೆಯಲ್ಲಿ ಕೆಲಸ ಮಾಡಿದ್ದೇವೆ. ನಮ್ಮ ನಾಯಕರಾಗಿ ಜೊತೆಯಲ್ಲಿದ್ದೆವು, ಹಾಗಾಗಿ ಅವರ ಬಗ್ಗೆ ವಿಶ್ವಾಸವಿದೆ. ಅವರ ಪಕ್ಷ ಬೇರೆ ನನ್ನ ಪಕ್ಷ ಬೇರೆ ಇದೆ ನಮ್ಮ ದಾರಿ ಬೇರೆ ಇದೆ. ಕೋಲಾರವನ್ನು ಅದೇನೇ ಆದರೂ ಗೆಲ್ಲಬೇಕು ಅಂತ ತೀರ್ಮಾನ ಮಾಡಿದ್ದೇವೆ. ಬಿಜೆಪಿ ಅಭ್ಯರ್ಥಿಯೇ ಕೋಲಾರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಸಚಿವ ಸುಧಾಕರ್ ಹೇಳಿದರು.

0 Response to ಕೋಲಾರದಲ್ಲಿ ಸ್ಪರ್ಧೆ ನಿರ್ಧಾರ ಸಿದ್ದರಾಮಯ್ಯಗೆ ಮಾರಕ, ಬಿಜೆಪಿ ಗೆಲ್ತೀವಿ ಎಂದ ಸಚಿವ ಸುಧಾಕರ್

Post a Comment

Advertise

close