-->

Responsive Ads

ಚಿಕ್ಕಬಳ್ಳಾಪುರ ಬಳಿಯ ಇಶಾ ಆದಿಯೋಗಿ ಪ್ರತಿಮೆ ಸ್ಥಾಪನೆ ಕಾಮಗಾರಿಗೆ ಹೈಕೋರ್ಟ್ ತಡೆ


ಬೆಂಗಳೂರು:-

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ಅವಳಗುರ್ಕಿ ಬಳಿಯಲ್ಲಿ ಆದಿಯೋಗಿ ಪ್ರತಿಮೆ ಸ್ಥಾಪನೆಯ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿ ನಡೆಸಬಾರದು ಹಾಗೂ ಈ ಸ್ಥಳಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು  ಎಂದು ಹೈಕೋರ್ಟ್ ಆದೇಶಿಸಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಕಸಬಾ ಹೋಬಳಿ ಚಂಬಳ್ಳಿಯ ಕೃಷಿಕ S.ಕ್ಯಾತಪ್ಪ, ಮಾಸ್ಟರು ಗ್ರಾಮದ G.M.ಶ್ರೀಧರ ಸೇರಿದಂತೆ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ P.B.ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ S. ಕಿಣಗಿ ಅವರಿಂದ ವಿಭಾಗಿಯ ನ್ಯಯ ಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ M. ಶಿವಪ್ರಕಾಶ್, ರಾಜ್ಯ ಸರ್ಕಾರ ಕುಯಮುತ್ತೂರಿನ ಇಶಾ ಯೋಗ ಕೇಂದ್ರಕ್ಕೆ ಕಾನೂನು ಬಾಹಿರವಾಗಿ ಕೆರೆ ಕುಂಟೆ ಕಂಠಿಗಳು ಹಾಗೂ ಗೋಮಾಳ ವ್ಯಾಪ್ತಿಯ ಜಮೀನನ್ನು ಮಂಜೂರು ಮಾಡಿದೆ. ಇಲ್ಲಿನ ನಂದಿ ಬೆಟ್ಟಕ್ಕೆ ಐತಿಹಾಸಿಕ ಮಹತ್ವವಿದೆ. ಇದರ ಸುತ್ತಮುತ್ತಲಿನ ಜಮೀನನ್ನು ಪರಭಾರೆ ಮಾಡಿರುವ ಕಾರಣ ರೈತರ ಬದುಕಿಗೆ ಹಾಗೂ ಪರಿಸರಕ್ಕೆ ಬರಿಸಲಾಗದ ಆನೆಯಾಗಲಿದೆ ಎಂದು ವಿವರಿಸಿದರು.

 ಈ ಸಂಬಂಧ ಪರಿಸರದ ಸೂಕ್ಷ್ಮ ವಲಯಕ್ಕೆ ಒಳಪಡುವ ಈ ಪ್ರದೇಶವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಕಾನೂನು ಬಹಿರ. ಆದ್ದರಿಂದ ಇಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಆದೇಶಿಸಬೇಕು ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಪ್ರತಿವಾದಿಗಳಾದ ಕೇಂದ್ರ ಪರಿಸರ ಸಚಿವಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ  ಇಶಾ ಯೋಗ ಕೇಂದ್ರವು ಸೇರಿದಂತೆ 16 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.

0 Response to ಚಿಕ್ಕಬಳ್ಳಾಪುರ ಬಳಿಯ ಇಶಾ ಆದಿಯೋಗಿ ಪ್ರತಿಮೆ ಸ್ಥಾಪನೆ ಕಾಮಗಾರಿಗೆ ಹೈಕೋರ್ಟ್ ತಡೆ

Post a Comment

Advertise