ನವದೆಹಲಿ:-
ಕೇಂದ್ರ ಸರ್ಕಾರ 2023 ರ ಕೇಂದ್ರ ಬಜೆಟ್ ಮಂಡನಿಗೂ ಮೊದಲೇ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರ ನೌಕರರ ತುಟ್ಟಿಭತ್ಯೆ (DA) ಶೇಕಡ 38 ರಿಂದ 41ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಭವಿಷ್ಯದ ಸೂಚ್ಯಂಕವು (ಡಿಸೆಂಬರ್ 2022 ಕ್ಕೆ) ಒಂದೇ ಆಗಿದ್ದರೆ ತುಟಿಭತ್ಯೆ ಶೇಕಡ 3% ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಶೇಕಡ 3% DA ಹೆಚ್ಚಳದ ನಂತರ ಸಂಬಳ ಹೆಚ್ಚಳದ ವಿವರಗಳು
ನೌಕರರ ಮೂಲವೇತನ ಅಥವಾ ಪಿಂಚಣಿ ರೂ. 18,000 ಆಗಿದ್ದರೆ, 41% ದರದಲ್ಲಿ ಅಂದಾಜು DA/DR ಸಂಬಳಕ್ಕೆ ಸೇರಿಸಿದಾಗ ಪ್ರತಿ ತಿಂಗಳಿಗೆ ರೂ. 7,380 ರಷ್ಟು ಸಂಬಳ ಹೆಚ್ಚಳ ಸಿಗುತ್ತದೆ.
ಸರ್ಕಾರಿ ನೌಕರರಿಗೆ ಶೇಕಡ 38% ದರದಲ್ಲಿ DA/DR ಮೊತ್ತವು ತಿಂಗಳಿಗೆ ರೂ. 6,840 ಸಿಗುತ್ತದೆ. ಇದರ ಅರ್ಥ ಸಂಬಳವು ತಿಂಗಳಿಗೆ 900 ರೂಪಾಯಿಗಳಷ್ಟು ಹೆಚ್ಚಾಗುತ್ತದೆ.
ಸರ್ಕಾರಿ ನೌಕರರ ವಾರ್ಷಿಕ ವೇತನದಲ್ಲಿ 900×12=10,800 ರೂ. ಅಷ್ಟು ಹೆಚ್ಚಳ ಆಗಿರುತ್ತದೆ.
ಆದರೆ ಶೇಕಡ 18,000 ರೂ. ಮೂಲ ವೇತನವನ್ನು ಪಡೆಯುವ ಸರ್ಕಾರಿ ನೌಕರನ ವೇತನವು 2023 ರಲ್ಲಿ ತುಟ್ಟಿಭತ್ಯೆ (DA) ಹೆಚ್ಚಳದೊಂದಿಗೆ ತಿಂಗಳಿಗೆ ಹೆಚ್ಚುವರಿ 900 ರೂ. ಗಳನ್ನು ಪಡೆಯಬಹುದು. ವಾರ್ಷಿಕ ಆದಾರದ ಮೇಲೆ ಇದು 6,480 ರೂ. ಮೊತ್ತ ಆಗಿರುತ್ತದೆ.
ಇನ್ನೂ ಕಳೆದ ವರ್ಷದ ಆರಂಭದಲ್ಲಿ ಕೇಂದ್ರ ಸಚಿವ ಸಂಪುಟವು ತುಟ್ಟಿಭತ್ಯೆಯನ್ನು ಶೇಕಡ 4% ರಿಂದ 38% ರಷ್ಟು ಹೆಚ್ಚಿಸಿತ್ತು. ಆ ಭತ್ಯೆಗಳ ಪಾವತಿಗೆ ಬೊಕ್ಕಸಕ್ಕೆ ಒಟ್ಟು 12,852 ರೂ. ಕೋಟಿ ಹೊರೆಯಾಗಿದೆ. ಈ ಕ್ರಮವು ಸುಮಾರು 47.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡಿದೆ. ಮಾರ್ಚ್ 2022 ರಲ್ಲಿ ಕ್ಯಾಬಿನೆಟ್ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿಭತ್ಯೆ (DA) ಮತ್ತು ಪಿಂಚಣಿ ದಾರರಿಗೆ ತುಟ್ಟಿಭತ್ಯೆ (DR) ಅನ್ನು ಈ ಹಿಂದೆ ಇದ್ದ ಶೇಕಡ 31% ರಿಂದ ಶೇಕಡ 34% ಕ್ಕೆ ಹೆಚ್ಚಿಸಿತ್ತು. ಇದು ಜನವರಿ 01/2022 ರಿಂದ ಜಾರಿಗೆ ಬಂದಿರುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ
No comments:
Post a Comment