ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ 7ನೇ ವೇತನ ಆಯೋಗದಡಿ (7th Pay Commission) ತುಟ್ಟಿಭತ್ಯೆ (ಡಿಎ) ಶೇಕಡಾ 4 ರಷ್ಟು ಹೆಚ್ಚಿಸಿದೆ. ಇದರಿಂದ ಹಿಂದಿದ್ದ ಶೇಕಡಾ 46ರಷ್ಟು ತುಟ್ಟಿಭತ್ಯೆ ಪ್ರಮಾಣ ಈಗ ಶೇ.50 ಏರಿಕೆಯಾಗಿದೆ. ಜೊತೆಗೆ ಶೇಕಡಾ 4 ರಷ್ಟು ಪರಿಹಾರ (ಡಿಆರ್) ಸಹ ನೀಡಿದೆ. ಇದೀಗ ಸರ್ಕಾರಿ ನೌಕರರಿಗೆ ಬಿಗ್ ರಿಲೀಫ್ ನೀಡುವ ಬೆಳವಣಿಗೆಯೊಂದು ನಡೆದಿದೆ. ಅದರ ಮಾಹಿತಿಗೆ ಮುಂದೆ ಓದಿ.
ಆದಷ್ಟು ಶೀಘ್ರವೇ 7ನೇ ವೇತನ ಆಯೋಗದ ಬಾಕಿಯನ್ನು ತೆರವುಗೊಳಿಸಲು ತೀರ್ಮಾನಿಸಲಾಗಿದೆ. ಇದರಿಂದ ಕಾಯ ನಿರ್ವಹಿಸಸುತ್ತಿರುವ ಹಾಲಿ ಹಾಗೂ ಮಾಜಿ ಉದ್ಯೋಗಿಗಳಿಗೆ ಬಿಗ್ ರಿಲೀಫ್ ಸಿಗಲಿದೆ. ಇವರಿಗೆಲ್ಲ ನೀಡಬೇಕಾದ ಶಿಫಾರಸುಗಳಿಗೆ ಸಂಬಂಧಿಸಿದಂತೆ 7ನೇ ವೇತನ ಆಯೋಗದಿಂದ (7ನೇ CPC) ಪಾವತಿಸದ ಬಾಕಿಗಳನ್ನು ಇತ್ಯರ್ಥಪಡಿಸುವ ಕುರಿತು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ವಕೀಲರು ಮೂಲಕ ದೆಹಲಿ ಹೈಕೋರ್ಟ್‌ಗೆ ಮಾಹಿತಿ ಸಲ್ಲಿಸಿದೆ.
ರೂ. 738 ಕೋಟಿ ಪಾವತಿ, ತೆರವಿಗೆ ಬಳಕೆ
ಈ ಮೂಲಕ ಎಂಸಿಡಿ ಹೈಕೋರ್ಟ್‌ನಲ್ಲಿ ಬಾಕಿ ತೆರವಿನ ಕುರಿತು ತನ್ನ ಬದ್ಧತೆಯನ್ನು ದೃಢಪಡಿಸಿದೆ. ದೆಹಲಿ ರಾಜ್ಯ ಸರ್ಕಾರವು ಬಾಕಿ ಉಳಿಸಿಕೊಂಡ 'ಮೂಲ ತೆರಿಗೆ ನಿಯೋಜನೆ' ಸುಮಾರು 738 ಕೋಟಿ ರೂ. ಹಣವನ್ನು ಕಟ್ಟಲಿದೆ ಎಂದು ಎಸಿಡಿ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು. ಈ ಹಣವನ್ನು ಬಾಕಿ ತೆರವುಗೊಳಿಸಲು ಬಳಸಲಾಗುವುದು ಎಂದು ತಿಳಿಸಿದರು.
MCD ವಿಸರ್ಜನೆ ತಾಕೀತು
ಕೇಂದ್ರದ ಮಾಜಿ ಉದ್ಯೋಗಿಗಳ ನಿವೃತ್ತಿ ಪ್ರಯೋಜನಗಳನ್ನು ಮುಂದಿನ 12 ವಾರಗಳಲ್ಲಿ ಸರಿಪಡಿಸಲಾಗುವುದು ಎಂದು ವಕೀಲರು ಹೇಳಿದರು. ಇದಕ್ಕೆ ನ್ಯಾಯಪೀಠವು, ವಿಳಂಬ ಪಾವತಿಯ ಕುರಿತು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಪರಿಸ್ಥಿತಿ ಸುಧಾರಿಸದಿದ್ದರೆ ಇದನ್ನು ವಿಸರ್ಜಿಸಲು ನಿರ್ದೇಶಿಸುವುದಾಗಿ ಹೇಳಿತು.
ಮುಂದಿನ ಹತ್ತು ದಿನಗಳಲ್ಲಿ ಬಾಕಿ ಮೊತ್ತ ಪಾವತಿಗೆ ಸೂಚನೆ ನೀಡಿದೆ. ಈ ಸೂಚನೆಗೆ ನಾಗರಿಕ ಸಂಸ್ಥೆಯಾದ ಎಂಸಿಡಿ ಬದ್ಧವಾಗಿದೆ ಎಂದು ವಕೀಲರು ಹೇಳಿದರು.
ಆದೇಶ ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ಕೇಸ್
ನ್ಯಾಯಪೀಠವು ಮೇಲಿನ ಈ ಸೂಚನೆ ಜೊತೆಗೆ ನಿರ್ದೇಶನ, ಭರವಸೆಗಳನ್ನು ಉಲ್ಲಂಘಿಸಿದರೆ ಅರ್ಜಿದಾರರು ನಾಗರಿಕ ಸಂಸ್ಥೆ ವಿರುದ್ಧ (ಎಂಸಿಡಿ) ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ಅವಕಾಶ ಇದೆ. ಇದಕ್ಕೆ ಅವರು ಸ್ವಾತಂತ್ರ್ಯ ಹೊಂದಿರುತ್ತಾರೆ ಎಂದು ಹೇಳಿತು.
ಬಾಕಿ ಕೇಳುವುದು ಉದ್ಯೋಗಿಗಳ ಹಕ್ಕು. ಎಂಸಿಡಿ ಏನು ದಾನ ಮಾಡುತ್ತಿಲ್ಲ ಎಂದು ಎಸಿಡಿ ಹಾಲಿ ಹಾಗೂ ಮಾಜಿ ನೌಕರರು ಆದ ಅರ್ಜಿ ದಾರರಿಗೆ ನ್ಯಾಯಾಲಯ ತಿಳಿಸಿದೆ. ದೆಹಲಿ ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ಸಹಮತ ವ್ಯಕ್ತಪಡಿಸಿದರು. ಜೊತೆಗೆ ಇದರ ಪಾವತಿಗೆ ಏಪ್ರಿಲ್ 25 ರವರೆಗೆ ಅವಕಾಶ ನೀಡುವಂತೆ ಅವರು ಮನವಿ ಮಾಡಿಕೊಂಡರು.
ನಗರದ ಅಭಿವೃದ್ಧಿಯ ಸಂಸ್ಥೆಯು ಉತ್ತಮ ವ್ಯವಸ್ಥೆ ಹೊಂದಬೇಕು. ನಿಮ್ಮಲ್ಲಿ ಆರ್ಥಿಕ ಸದೃಢತೆ ಇಲ್ಲದಾದರೆ ನೀವು ಹೇಗೆ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತೀರಿ ಎಂದು ನ್ಯಾಯಾಲಯ ಪ್ರಶ್ನೆ ಮಾಡಿತು. ಏಳು ವರ್ಷಗಳಿಂದ ಬಾಕಿ ಇರುವುದನ್ನು ಗಮನಿಸಿ ಈ ನಾಗರಿಕ ಸಂಸ್ಥೆ ಬಡವರನ್ನು ಸುಲಿಗೆ ಮಾಡಲು ಸಾಧ್ಯವಿಲ್ಲ ಎಂದು ಖಾರವಾಗಿ ನುಡಿಯಿತು.
ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು
No comments:
Post a Comment