-->

ಕುಡಿದು ಶಾಲೆಗೆ ಬಂದ ಶಿಕ್ಷಕ; ಚಪ್ಪಲಿ ಹಿಡಿದು ಅಟ್ಟಾಡಿಸಿದ ವಿದ್ಯಾರ್ಥಿಗಳು..! ವಿಡಿಯೋ ವೈರಲ್ಪ್ರತಿದಿನದಂತೆ ಶಾಲೆಗೆ ಬಂದ ಮಕ್ಕಳು ಮತ್ತು ಶಿಕ್ಷಕರು ಬರುವ ಮುಂಚಿತವಾಗಿಯೇ ತರಗತಿಯಲ್ಲಿ ಕುಳಿತು ಪಾಠ ಕೇಳಲು ತಯಾರಾಗಿದ್ದರು. ಆದರೆ ಈ ಮಧ್ಯೆ ಬೆಳ್ಳಂಬೆಳಗ್ಗೆ ಶಾಲೆಗೆ ಕಂಠಪೂರ್ತಿ ಕುಡಿದು ಬಂದ ತಮ್ಮ ಶಾಲಾ ಶಿಕ್ಷಕನನ್ನು ಕಂಡು ಸಿಟ್ಟಿಗೆದ್ದ ವಿದ್ಯಾರ್ಥಿಗಳ ಗುಂಪು ಆತನನ್ನು ಬೈಕ್ ಸಮೇತ ಬೆನ್ನಟ್ಟಿ ಓಡಿಸಿಕೊಂಡು ಬಂದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆ ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ವರದಿಯಾಗಿದೆ.


ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಪಿಲಿಭಟ್ಟ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ, ಸ್ಥಳೀಯ ಗ್ರಾಮಸ್ಥರ  ಮೊಬೈಲ್​ನಲ್ಲಿ ಸಂಪೂರ್ಣ ಘಟನೆಯ ವಿಡಿಯೋ ರೆಕಾರ್ಡ್ ಆಗಿದೆ. ಶಾಲಾ ಶಿಕ್ಷಕನು ತರಗತಿಯಲ್ಲಿ ಕುಡಿದ ಅಮಲಿನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದು, ನಿಂತ ಜಾಗದಲ್ಲಿ ನಿಲ್ಲಲಾಗದೆ ಪದೇ ಪದೇ ಕುಸಿದು ಬಿದ್ದಿದ್ದಾನೆ. ದಿನನಿತ್ಯ ಕುಡಿದುಬರುವ ಶಿಕ್ಷಕನ ಹಿಂಸೆ ತಾಳಲಾರದ ಶಾಲಾ ವಿದ್ಯಾರ್ಥಿಗಳು ಇಂದು ಕುಡಿದು ಬಂದ ಶಾಲಾ ಶಿಕ್ಷಕನಿಗೆ ಬುದ್ದಿ ಕಲಿಸಬೇಕು ಎಂದು ಪಣತೊಟ್ಟು ಆತನನ್ನು ಅಟ್ಟಾಡಿಸಿಕೊಂಡು ಹೋದ ದೃಶ್ಯ ಸದ್ಯ ವೈರಲ್ ಆಗಿದೆ.

ದಿನ ನಿತ್ಯ ಶಾಲೆಗೆ ಕುಡಿದು ಬರುವ ಶಿಕ್ಷಕನ  ಚಟದಿಂದ ಬೇಸತ್ತ ವಿದ್ಯಾರ್ಥಿಗಳು ಆತನಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ನಿರ್ಧರಿಸಿ, ಕೈಗೆ ಚಪ್ಪಲಿ ತೆಗೆದುಕೊಂಡು ಓಡಿಸಿಕೊಂಡು ಬಂದಿದ್ದಾರೆ. ಕೂಡಲೇ ಹೆದರಿ, ತನ್ನ ಬೈಕ್​ ಏರಿದ ಶಿಕ್ಷಕ, ಕೆಲವೇ ನಿಮಿಷಗಳಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ವೀಡಿಯೊದಲ್ಲಿ ಆತ ಬೈಕ್ ಏರಲು ಪ್ರಯತ್ನಿಸುತ್ತಿರುವಾಗ ವಿದ್ಯಾರ್ಥಿಗಳು ಅವನ ಮೇಲೆ ಚಪ್ಪಲಿಗಳನ್ನು ಎಸೆದಿರುವುದು ಕಂಡುಬಂದಿದೆ0 Response to ಕುಡಿದು ಶಾಲೆಗೆ ಬಂದ ಶಿಕ್ಷಕ; ಚಪ್ಪಲಿ ಹಿಡಿದು ಅಟ್ಟಾಡಿಸಿದ ವಿದ್ಯಾರ್ಥಿಗಳು..! ವಿಡಿಯೋ ವೈರಲ್

Post a Comment

Advertise

close