Headlines
Loading...
ವಿದ್ಯಾರ್ಥಿಗಳಿಬ್ಬರಿಗೆ ಬಾಸುಂಡೆ ಬರುವ ಹಾಗೆ ಥಳಿಸಿದ ಶಿಕ್ಷಕಿ

ವಿದ್ಯಾರ್ಥಿಗಳಿಬ್ಬರಿಗೆ ಬಾಸುಂಡೆ ಬರುವ ಹಾಗೆ ಥಳಿಸಿದ ಶಿಕ್ಷಕಿ



ಕೊಪ್ಪಳ: 7ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಿಗೆ ಬಾಸುಂಡೆ ಬರುವ ಹಾಗೆ ಶಿಕ್ಷಕಿಯಿಂದ ಹಲ್ಲೆ ಆರೋಪ ಮಾಡಿರುವಂತಹ ಘಟನೆ ಜಿಲ್ಲೆ ಕನಕಗಿರಿ ತಾಲೂಕಿನ ಚಿಕ್ಕಡಂಕನಕಲ್ ಶಾಲೆಯಲ್ಲಿ ನಡೆದಿದೆ. ಚಿಕ್ಕಡಂಕನಕಲ್ ಪ್ರಾಥಮಿಕ ಶಾಲೆ ಶಿಕ್ಷಕಿ ರೂಪಾ ವಿರುದ್ಧ ಆರೋಪ ಮಾಡಲಾಗಿದೆ. ಶಿಕ್ಷಕಿ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ರೂಪಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕುಡಿದ ಮತ್ತಲ್ಲಿ ಹೊಂಗೆ ಮರಕ್ಕೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ; ಕೌಟುಂಬಿಕ ಕಲಹ ಕಾರಣವೇ?



ನೆಲಮಂಗಲ: ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕುಡಿದ ಮತ್ತಲ್ಲಿ ಹೊಂಗೆ ಮರಕ್ಕೆ ನೇಣು ಬಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೊದಲಕೋಟೆ ಗ್ರಾಮದ ನಿವಾಸಿ ಮಂಜುನಾಥ್ (44) ಮೃತ ದುರ್ದೈವಿ.

ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ್ ಇತ್ತೀಚೆಗೆ ಕೌಟುಂಬಿಕ ಕಲಹದಿಂದ ಬೇಸತ್ತಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದ ಮಂಜುನಾಥ್‌, ಗುರುವಾರ ಕುಡಿದ ಮತ್ತಿನಲ್ಲಿ ಹೊಂಗೆ ಮರಕ್ಕೆ ನೇಣಿಗೆ ಶರಣಾಗಿದ್ದಾನೆ. ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಜಾನುವಾರುಗಳನ್ನು ರಕ್ಷಿಸಲು ಚಿರತೆಗೆ ಆಹಾರವಾದ ಎರಡು ನಾಯಿಗಳು



ಯಾದಗಿರಿ ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಜನರಲ್ಲಿ ಚಿರತೆ ದಾಳಿಗಳ ಭೀತಿ ಹೆಚ್ಚಳವಾಗಿದೆ. ಇದಕ್ಕೆ ಕಾರಣ, ನಾಲ್ಕು ದಿನಗಳಲ್ಲಿ ನಾಲ್ಕು ಸಾಕು ಪ್ರಾಣಿಗಳು ಚಿರತೆಗೆ ಬಲಿಯಾಗಿರುವುದು.

ಯಾದಗಿರಿ ತಾಲೂಕಿನ ರಾಮಸಮುದ್ರದಲ್ಲಿ ಚಿರತೆ ಅಟ್ಟಹಾಸ ಹೆಚ್ಚಾಗುತ್ತಿದ್ದು, ಕಳೆದ ನಾಲ್ಕು ದಿನಗಳಲ್ಲಿ ನಾಲ್ಕು ಸಾಕು ಪ್ರಾಣಿಗಳು ಬಲಿಯಾಗಿವೆ.

ರಾತ್ರಿಯಾದರೆ ಸಾಕು ರಾಮಸಮುದ್ರ ಗ್ರಾಮಕ್ಕೆ ಚಿರತೆ ಎಂಟ್ರಿ ಕೊಡುತ್ತಿದೆ. ಹೀಗಾಗಿ ಮನೆಯೊಳಗಿಂದ ಹೊರಗೆ ಕಾಲಿಡಲು ಜನರು ಭಯ ಪಡುವಂತಾಗಿದೆ. ರೈತರಾದ ನಾಗೇಂದ್ರರೆಡ್ಡಿ ಮತ್ತು ಮಲ್ಲಿಕಾರ್ಜುನಗೆ ಸೇರಿದ ಎರಡು ಜಾನುವಾರು ಬಲಿಯಾಗಿವೆ. ಅಲ್ಲದೆ, ಜಾನುವಾರುಗಳ ರಕ್ಷಣೆಗೆ ಮುಂದಾದ ಎರಡು ಸಾಕು ನಾಯಿಗಳು ಚಿರತೆ ದಾಳಿಗೆ ಜೀವ ಕಳೆದುಕೊಂಡಿವೆ. ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿಗಳು ನಡೆದಿರುವುದರಿಂದ ಜಮೀನಿಗೆ ಹೋಗಲು ರಾಮಸಮುದ್ರ ಗ್ರಾಮದ ರೈತರು ಹಿಂದೇಟು ಹಾಕುತ್ತಿದ್ದಾರೆ.

ಇನ್ನು, ಚಿರತೆ ದಾಳಿ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಆದರೆ ಈವರೆಗೆ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದಿಲ್ಲ, ಇದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಬೋನ್​ ಇರಿಸಿ ಚಿರತೆ ಸೆರೆಹಿಡಿದು ಮುಂದೆ ನಡೆಯುವ ಜೀವ ಹಾನಿಯನ್ನು ತಪ್ಪಿಸುವಂತೆ ಆಗ್ರಹಿಸುತ್ತಿದ್ದಾರೆ.

ಇನ್ನು ಚಿರತೆ ದಾಳಿ ಬಗ್ಗೆ ಮಾತನಾಡಿದ ಡಿಎಫ್​ಒ ಕಾಜೊಲ್ ಪಾಟೀಲ್, ಯಾದಗಿರಿಯಲ್ಲಿ ಹಲವು ದಿನಗಳಿಂದ ಚಿರತೆ ದಾಳಿ ನಡೆಸಿರುವ ಮಾಹಿತಿ ತಿಳಿದುಬಂದಿದೆ. ಚಿರತೆ ಹಿಡಿಯಲು ಯಾದಗಿರಿಯಲ್ಲಿ ಬೋನ್​ಗಳು ಲಭ್ಯವಿಲ್ಲ, ಕಾರ್ಯಾಚರಣೆಗೆ ಬೇಕಾದ ಅಗತ್ಯ ಸೌಲಭ್ಯಗಳು ಕಡಿಮೆ ಇವೆ. ಈ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಶಿಬಿರಗಳನ್ನು ಏರ್ಪಡಿಸುತ್ತೇವೆ ಎಂದರು.



0 Comments: