Ads

Sunday 22 January 2023

ಹೆಚ್ಚುವರಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ತರಗತಿಗಳ ಬಹಿಷ್ಕಾರ ಹಾಗೂ ಪ್ರತಿಭಟನೆಗೆ ಮುಂದಾದ ಶಾಲಾ ಶಿಕ್ಷಕರು

Admin       Sunday 22 January 2023


ಬೆಂಗಳೂರು:-

ಹೆಚ್ಚುವರಿ ಶಾಲಾ ಶಿಕ್ಷಕರ ವರ್ಗಾವಣೆ ಮತ್ತು ಚುನಾವಣೆ ಕೆಲಸಕ್ಕೆ ಶಿಕ್ಷಕರ ಬಳಕೆ ಬಗ್ಗೆ ಇಲಾಖೆ ಹಾಗೂ ಶಿಕ್ಷಣ ಸಚಿವರ ನಡೆಗೆ ರಾಜ್ಯ ಸರ್ಕಾರ ಶಿಕ್ಷಕರ ಸಂಘ ವಿರೋಧ ವ್ಯಕ್ತಪಡಿಸಿದೆ.

ಶಾಲಾ ತರಗತಿಗಳನ್ನು ಬಹಿಷ್ಕರಿಸಿ ಸರ್ಕಾರಿ ಶಾಲಾ ಶಿಕ್ಷಕರು ಧರಣಿಗೆ ಮುಂದಾಗಿದ್ದಾರೆ.

ಈಗಾಗಲೇ SSLC, PUC, 5 ಮತ್ತು 8 ನೇ ತರಗತಿ ಪರೀಕ್ಷೆ ನಿಗದಿಯಾಗಿದೆ. ಸಾಲು ಸಾಲು ಪರೀಕ್ಷೆಗಳ ನಡುವೆ ಶಿಕ್ಷಕರ ಸಂಘ ಧರಣಿಗೆ ಮುಂದಾಗಿದೆ.

ಇನ್ನೂ ಚುನಾವಣೆ ಕೆಲಸಕ್ಕೆ ಕಡ್ಡಾಯ ಶಿಕ್ಷಕರ ಬಳಕೆ ವಿಚಾರ ಹಾಗೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೈ ಬಿಡುವಂತೆ ಆಗ್ರಹಿಸಲಾಗಿದೆ. ಶಿಕ್ಷಣ ಇಲಾಖೆಗೆ ರಾಜ್ಯ ಶಿಕ್ಷಕರ ಸಂಘದಿಂದ ಎರಡು ದಿನಗಳು ನೀಡಲಾಗಿದೆ. ಎರಡು ದಿನಗಳಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಧರಣಿ ನಡೆಸಲಾಗುವುದು ಎಂದು ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗೇಗೌಡ ಈ ಬಗ್ಗೆ ಸಭೆ ನಡೆಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ 

logoblog

Thanks for reading ಹೆಚ್ಚುವರಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ತರಗತಿಗಳ ಬಹಿಷ್ಕಾರ ಹಾಗೂ ಪ್ರತಿಭಟನೆಗೆ ಮುಂದಾದ ಶಾಲಾ ಶಿಕ್ಷಕರು

Previous
« Prev Post

No comments:

Post a Comment