ಕನ್ನಡ ನ್ಯೂಸ್-24
ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮಕ್ಕಳಿಗೆ ಸರಿಯಾaಗಿ ಪಾಠ ಮಾಡದೆ ಮೊಬೈಲ್ ನಲ್ಲಿ ತಲ್ಲೀನರಾಗಿರುತ್ತಾರೆ ಎಂದು ಹೊಮ್ಮ ಗ್ರಾಮದ ಗ್ರಾಮಸ್ಥರೆಲ್ಲ ಸೇರಿ ಶಾಲೆಗೆ ಬೀಗ ಜಡದಿದ್ದಾರೆ.
ಹೊಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರುಗಳಾದ ರವೀಶ್, ನಟರಾಜು ಇವರಿಬ್ಬರೂ ಶಿಕ್ಷಕರು ಶಾಲಾ ಮಕ್ಕಳಿಗೆ ಸರಿಯಾದ ಪಾಠ ಮಾಡುತ್ತಿಲ್ಲ. ಯಾವಾಗಲೂ ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಯಾವಾಗಲೂ ಗ್ರಾಮಸ್ಥರಿಗೆ ದೂರು ಬರುತ್ತಿತ್ತು.
ಇಬ್ಬರು ಶಾಲಾ ಶಿಕ್ಷಕರು ಶಾಲಾ ಮಕ್ಕಳಿಗೆ ಸರಿಯಾಗಿ ಪಾಠ ಮಾಡದ ಕಾರಣ ಪ್ರತಿ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಕಾಣುತ್ತಿತ್ತು. ಅದಲ್ಲದೆ ಶೈಕ್ಷಣಿಕವಾಗಿ ಶಾಲಾ ಮಕ್ಕಳು ತುಂಬಾ ಹಿಂದುಳಿದಿದ್ದರು.
ಈ ಹಿಂದೆ ಶಿಕ್ಷಕರನ್ನು ವರ್ಗಾಯಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಕೂಡ ಮಾಡಿದರೂ ಯಾವುದೇ ಪ್ರಯೋಜನವಿಲ್ಲ. ಇದರಿಂದ ರೊಚ್ಚಿಗೆದ್ದ ಹೊಮ್ಮ ಗ್ರಾಮದ ಗ್ರಾಮಸ್ಥರು ಇಂದು ಏಕಾಏಕಿ ಶಾಲೆಗೆ ನುಗ್ಗಿ ಶಿಕ್ಷಕರನ್ನು ಹೊರಹಾಕಿ ಶಾಲೆಗೆ ಬೇಗ ಹಾಕಿದ್ದಾರೆ.
0 Response to ಕಳ್ಳಾಟವಾಡುತ್ತಿದ್ದ ಶಾಲಾ ಶಿಕ್ಷಕರಿಗೆ ಪಾಠ ಕಲಿಸಿದ ಗ್ರಾಮಸ್ಥರು....!
Post a Comment